‘ಅಹಿಂಸೆ’ಮತ್ತು ‘ಕರುಣೆ’ಯಆಧಾರದ ಮೇಲೆ ಆಂತರಿಕ ಶಾಂತಿಯನ್ನು ಬೆಳೆಸುವಲ್ಲಿ ಭಾರತ ಮತ್ತು ಚೀನಾದ ಜನರು ಒಟ್ಟಾಗಿ ಕೆಲಸ ಮಾಡಿದರೆ ಜಗತ್ತಿಗೆ ಪ್ರಯೋಜನವಾಗುತ್ತದೆ: ದಲೈ ಲಾಮಾ

ಈ ಟಿಬೆಟಿಯನ್ ಬೌದ್ಧ ನಾಯಕ ಮನೋರಮಾ ಇಯರ್ ಬುಕ್2023ರಲ್ಲಿ ಹೀಗೆ ಬರೆಯುತ್ತಾರೆ:ಪ್ರಾಚೀನ ಭಾರತೀಯ ಆದರ್ಶಗಳು ಅಪಾರವಾದ ಸಮಕಾಲೀನ ಪ್ರಸ್ತುತತೆಯನ್ನು ಹೊಂದಿವೆ
Trivandrum / January 5, 2023

ತಿರುವನಂತಪುರಂ, ಜನವರಿ 05:ಐತಿಹಾಸಿಕವಾಗಿ ಬೌದ್ಧ ರಾಷ್ಟ್ರವಾಗಿರುವ ಚೀನಾವು 'ಅಹಿಂಸೆ' ಮತ್ತು 'ಕರುಣೆ'ಯಆದರ್ಶಗಳಲ್ಲಿ ಹುದುಗಿರುವ ಪ್ರಾಚೀನ ಭಾರತೀಯ ವಿವೇಕವನ್ನು ಅನುಸರಿಸಿದರೆ ಇಡೀ ಜಗತ್ತಿಗೇ ಪ್ರಯೋಜನವಾಗುತ್ತದೆಮತ್ತು ಎರಡೂ ದೇಶಗಳ ಎರಡೂವರೆ ಶತಕೋಟಿಗೂ ಹೆಚ್ಚು ಜನರು ಆಂತರಿಕ ಶಾಂತಿಯನ್ನು ಬೆಳೆಸುವ ಕೆಲಸ ಮಾಡಬೇಕುಎಂದು ದಲೈ ಲಾಮಾ ಹೇಳಿದ್ದಾರೆ.

 

ಕಾಲ ಕಳೆದಂತೆಭಾರತವು ಅನೇಕ ಕ್ಷೇತ್ರಗಳಲ್ಲಿ, ವಿಶೇಷವಾಗಿ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರಗಳಲ್ಲಿ ಮಹತ್ತರವಾದ ಪ್ರಗತಿಯನ್ನು ಸಾಧಿಸಿದೆ. ಬಾಹ್ಯ ನಿಶ್ಯಸ್ತ್ರೀಕರಣವು ಅಗತ್ಯವಾಗಿದ್ದರೂ, ಆಂತರಿಕ ನಿಶ್ಯಸ್ತ್ರೀಕರಣವುಸಹ ಅಷ್ಟೇ ಪ್ರಾಮುಖ್ಯತೆಯನ್ನು ಹೊಂದಿದೆ. ಈ ನಿಟ್ಟಿನಲ್ಲಿ, ‘ಅಹಿಂಸೆಮತ್ತು 'ಕರುಣೆ' ಎಂಬ ಹೃದಯ ಶ್ರೀಮಂತಿಕೆಯಲ್ಲಿ ಬೇರೂರಿರುವ ಶಾಂತಿಯುತ ಪರಿಜ್ಞಾನದಿಂದಾಗಿಭಾರತವು ಪ್ರಮುಖ ಪಾತ್ರವನ್ನು ವಹಿಸುತ್ತದೆ ಎಂದು ನಾನು ಪ್ರಾಮಾಣಿಕವಾಗಿ ಭಾವಿಸುತ್ತೇನೆ ”ಎಂದು 87 ವರ್ಷದ ಟಿಬೆಟಿಯನ್ ಬೌದ್ಧಧರ್ಮದ ಆಧ್ಯಾತ್ಮಿಕ ನಾಯಕ ಮನೋರಮಾ ಇಯರ್ ಬುಕ್ 2023 ರ ವಿಶೇಷ ಲೇಖನದಲ್ಲಿತಿಳಿಸಿದ್ದಾರೆ.

 "ಅಂತಹ ವಿವೇಕವು ಯಾವುದೇ ಒಂದು ಧರ್ಮವನ್ನು ಮೀರಿದ್ದಾಗಿದೆ ಮತ್ತು ಇದು ಸಮಕಾಲೀನ ಸಮಾಜದಲ್ಲಿ ಹೆಚ್ಚು ಸಮಗ್ರವಾದಹಾಗೂ ನೈತಿಕ ತಳಹದಿಯ ಮಾರ್ಗದಲ್ಲಿ ಪ್ರೋತ್ಸಾಹಿಸುವ ಸಾಮರ್ಥ್ಯವನ್ನು ಹೊಂದಿದೆ. ಆದ್ದರಿಂದ, ‘ಕರುಣೆ’ (ಸಹಾನುಭೂತಿ) ಮತ್ತು ‘ಅಹಿಂಸೆ’ಯನ್ನು (ಹಿಂಸೆ ಮಾಡದಿರುವುದು) ರೂಢಿಸಿಕೊಳ್ಳುವುದನ್ನು ಪ್ರಯತ್ನಿಸಲು ನಾನು ಪ್ರತಿಯೊಬ್ಬರನ್ನೂ ಪ್ರೋತ್ಸಾಹಿಸುತ್ತೇನೆ”ಎಂದು ದಲೈ ಲಾಮಾ ಅವರು ತಮ್ಮ ವಿದ್ವತ್ಪೂರ್ಣ ಲೇಖನದಲ್ಲಿ ಸ್ಪಷ್ಟವಾಗಿ ಹೇಳಿದ್ದಾರೆ.

ವಿಶ್ವ ಶಾಂತಿಯನ್ನು ಸಾಧಿಸುವ ನಿಟ್ಟಿನಲ್ಲಿ,ಜನರಿಗೆ ತಮ್ಮೊಳಗಿನ ಮನಃಶಾಂತಿ ಬೇಕಾಗಿದೆ ಮತ್ತು ಭೌತಿಕ ಅಭಿವೃದ್ಧಿ ಮತ್ತು ದೈಹಿಕ ಆನಂದವನ್ನು ಹಿಂಬಾಲಿಸಿ ಹೋಗುವುದಕ್ಕಿಂತ ಆ ಮನಃಶಾಂತಿಯೇ ಮುಖ್ಯವಾಗಿದೆ ಎಂದು ಅವರು ತಿಳಿಸಿದ್ದಾರೆ.

ಟಿಬೆಟಿಯನ್ ಜನರಲ್ಲಿ ಗ್ಯಾಲ್ವಾ ರಿಂಪೋಚೆ ಎಂದು ಪರಿಚಿತರಾಗಿರುವ 14 ನೇ ದಲೈ ಲಾಮಾ ಅವರು, “ಮಾನವರ ಅಗತ್ಯ ಸ್ವಭಾವವು ಕರುಣಾಮಯಿ ಆಗಿರುವುದು ಆಗಿದೆ. ಸಹಾನುಭೂತಿಯು ಮಾನವ ಸ್ವಭಾವದ ಅದ್ಭುತವಾಗಿದೆ, ಅಮೂಲ್ಯವಾದ ಆಂತರಿಕ ಸಂಪನ್ಮೂಲವಾಗಿದೆ ಮತ್ತು ನಮ್ಮ ವೈಯಕ್ತಿಕ ಯೋಗಕ್ಷೇಮ ಮತ್ತು ಸಮಾಜದೊಳಗಿನ ಸಾಮರಸ್ಯದ ಅಡಿಪಾಯವಾಗಿದೆ. ನಾವು ಹುಟ್ಟಿದ ಕ್ಷಣದಿಂದ ನಮ್ಮ ತಾಯಿ ನಮ್ಮನ್ನು ನೋಡಿಕೊಳ್ಳುತ್ತಾರೆ. ಆದ್ದರಿಂದ, ಕರುಣೆಯು ಎಲ್ಲಾ ಸಂತೋಷದ ಮೂಲ ಎಂದು ನಾವು ಚಿಕ್ಕ ವಯಸ್ಸಿನಿಂದಲೇ ಕಲಿಯುತ್ತೇವೆ” ಎಂದು ಹೇಳಿದ್ದಾರೆ.

ಹಾಗಿದ್ದರೂ, ಶಾಲೆಗೆ ಹೋಗಲು ಪ್ರಾರಂಭಿಸಿದ ನಂತರ ಸಹಾನುಭೂತಿಯ ಈ ಸಹಜ ಸ್ವಭಾವವು ಮರೆಯಾಗುತ್ತಿದೆ. ಆದ್ದರಿಂದ, ಭಾರತೀಯ ಶೈಕ್ಷಣಿಕ ವ್ಯವಸ್ಥೆಯಲ್ಲಿ 'ಅಹಿಂಸೆ' ಮತ್ತು 'ಕರುಣೆ’ಯನ್ನು ಅಳವಡಿಸುವ ಅವಶ್ಯಕತೆಯಿದೆ ಮತ್ತು ಇದರ ಹೆಚ್ಚಿನ ಪ್ರಯೋಜನವನ್ನುಭಾರತ ಮಾತ್ರವಲ್ಲದೆಇಡೀ ಪ್ರಪಂಚವು ಅರಿತುಕೊಳ್ಳುತ್ತದೆ ಎಂದು ಅವರು ವಿಷಾದದಿಂದ ಹೇಳಿದ್ದಾರೆ.

ಮಹಾತ್ಮಾ ಗಾಂಧಿಯನ್ನು 'ಅಹಿಂಸಾ’ ಮೂರ್ತಿ ಎಂದು ಶ್ಲಾಘಿಸಿರುವ ದಲೈ ಲಾಮಾ ಅವರು,ತನ್ನ ಆದರ್ಶ ವ್ಯಕ್ತಿಯಾಗಿರುವ ಗಾಂಧಿಯವರಿಂದ ಡಾ. ಮಾರ್ಟಿನ್ ಲೂಥರ್ ಕಿಂಗ್ ಮತ್ತು ನೆಲ್ಸನ್ ಮಂಡೇಲಾ ಅವರು ಗಾಂಧಿ ಪ್ರತಿಪಾದಿಸಿದ ಆದರ್ಶದಿಂದ ಹೆಚ್ಚು ಸ್ಫೂರ್ತಿ ಪಡೆದಿದ್ದಾರೆ ಎಂದು ಹೇಳಿದ್ದಾರೆ. "ನನಗೆ, ಅವರು ಮಾದರಿ ರಾಜಕಾರಣಿಯಾಗಿ ಉಳಿದಿದ್ದಾರೆ, ಎಲ್ಲಾ ವೈಯಕ್ತಿಕ ಪರಿಗಣನೆಗಳಿಗಿಂತ ಹೆಚ್ಚಾಗಿ ಪರಹಿತಚಿಂತನೆಯ ಮೇಲಿನ ನಂಬಿಕೆಯನ್ನು ಇರಿಸುವ ಮತ್ತು ಎಲ್ಲಾ ಶ್ರೇಷ್ಠ ಆಧ್ಯಾತ್ಮಿಕ ಸಂಪ್ರದಾಯಗಳಿಗೆ ನಿರಂತರವಾಗಿ ಗೌರವವನ್ನು ಉಳಿಸಿಕೊಂಡ ವ್ಯಕ್ತಿ ಅವರು" ಎಂದಿದ್ದಾರೆ.
ಚೀನೀ ಕಮ್ಯುನಿಸ್ಟರಿಂದ ಆಕ್ರಮಣಕ್ಕೆ ಒಳಗಾಗಿರುವ ಮತ್ತು ಅವರು ಆಕ್ರಮಿಸಿಕೊಂಡಿರುವ ತನ್ನ ತಾಯ್ನಾಡಿನಿಂದ ಪಲಾಯನ ಮಾಡಿದ ನಂತರ ಆರು ದಶಕಗಳಿಗಿಂತಲೂ ಹೆಚ್ಚು ಕಾಲ ಈ ದೇಶದಲ್ಲಿ ವಾಸಿಸುತ್ತಿದ್ದೇನೆ ಎಂದಿರುವ ದಲೈ ಲಾಮಾ ಅವರು, ತಮ್ಮನ್ನು ಭಾರತದ ದೀರ್ಘಾವಧಿಯ ಅತಿಥಿಗಳಲ್ಲಿ ತಾವೂ ಒಬ್ಬರು ಎಂದು ಬಣ್ಣಿಸಿದ್ದಾರೆ.

"ನನ್ನ ಸಂಪೂರ್ಣ ಆಲೋಚನಾ ಕ್ರಮವು ಐತಿಹಾಸಿಕ ನಳಂದಾ ವಿಶ್ವವಿದ್ಯಾಲಯದಿಂದ ಪಡೆದ ಜ್ಞಾನದಿಂದ ರೂಪುಗೊಂಡಿದೆ ಎಂದು ನಾನು ನಿಸ್ಸಂದೇಹವಾಗಿ ಹೇಳಬಲ್ಲೆ, ಅವರ ಕಟ್ಟಡಗಳ ಅವಶೇಷಗಳು ಇಂದಿನ ಬಿಹಾರದಲ್ಲಿ ಇನ್ನೂ ಕಂಡುಬರುತ್ತವೆ.ನಳಂದಾ ಸಂಪ್ರದಾಯವನ್ನು ಉಳಿಸುವ ಮೂಲಕ, ಟಿಬೆಟಿಯನ್ನರಾದ ನಾವುಕಷ್ಟದ ಸಮಯದಲ್ಲಿಯೂ ಸಹ ಪ್ರಬಲವಾಗಿ ಮತ್ತು ಸಕಾರಾತ್ಮಕವಾಗಿ ಉಳಿಯಲುಸಾಧ್ಯವಾಯಿತು. ಈಗ ಟಿಬೆಟಿಯನ್ನರಾದ ನಾವುನಳಂದಾದಿಂದ ಪಡೆದದ್ದನ್ನು ಭಾರತಕ್ಕೆ ಮರಳಿ ನೀಡುವುದು ನನ್ನ ಆಶಯವಾಗಿದೆ” ಎಂದು ಅವರು ಹೇಳಿದರು. "ಹಿಂದಿನಿಂದಲೂ, ನಾವು ಟಿಬೆಟಿಯನ್ನರು ಹೆಚ್ಚಾಗಿ ಭಾರತೀಯರನ್ನು ನಮ್ಮ ಗುರುಗಳು ಎಂದು ಮತ್ತು ನಮ್ಮನ್ನು 'ಚೇಲಾಗಳು' /ಶಿಷ್ಯರು ಎಂದು ಪರಿಗಣಿಸಿದ್ದೇವೆ. ಆದರೆ ಕಾಲಾನಂತರದಲ್ಲಿ, ಕೆಲವು ರೀತಿಯಲ್ಲಿ, ಪಾತ್ರಗಳು ಅದಲುಬದಲಾಗಿವೆಮತ್ತು ಶಿಷ್ಯಂದಿರು ಈಗ ಜ್ಞಾನಸಂಪತ್ತನ್ನು ಹಿಂದಿರುಗಿಸುವ ಸ್ಥಿತಿಯಲ್ಲಿದ್ದಾರೆ” ಎಂದು ವಿವರಿಸಿದ್ದಾರೆ.
 

ಟಿಬೆಟಿಯನ್ ನಿರಾಶ್ರಿತರನ್ನು ಸ್ವಾಗತಿಸಿರುವುದಕ್ಕೆ ಮತ್ತು ಅವರ ಮಕ್ಕಳಿಗೆ ಶಾಲೆಗೆ ಹೋಗುವ ಅವಕಾಶವನ್ನು ಹಾಗೂ ಟಿಬೆಟ್‌ನ ಮಹಾನ್ ಕಲಿಕಾ ಕೇಂದ್ರಗಳಿಂದ ಬಂದ ಸನ್ಯಾಸಿಗಳಿಗೆ ತಮ್ಮ ಅಧ್ಯಯನವನ್ನು ಪುನರಾರಂಭಿಸಲು ಅವಕಾಶವನ್ನು ನೀಡಿದ್ದಕ್ಕಾಗಿ ಅವರು ಭಾರತಕ್ಕೆ ಕೃತಜ್ಞತೆಯನ್ನು ವ್ಯಕ್ತಪಡಿಸಿದ್ದಾರೆ.

ಟಿಬೆಟಿಯನ್ನರು ಯಾವಾಗಲೂ ಭಾರತೀಯ ಚಿಂತನೆಯಿಂದ ಪ್ರಭಾವಿತರಾಗಿದ್ದಾರೆ ಎಂದು ದಲೈ ಲಾಮಾ ಹೇಳಿದ್ದಾರೆ.

"ಗೌರವ ಮತ್ತು ಕೃತಜ್ಞತೆಯ ಸಂಕೇತವಾಗಿ, ನಾವು ದೇಶಭ್ರಷ್ಟರಾಗಿದ್ದ ಸಮಯದಲ್ಲಿ, ಟಿಬೆಟಿಯನ್‌ ಭಾಷೆಯಿಂದ ಸಂಸ್ಕೃತ ಮತ್ತು ಇತರ ಭಾರತೀಯ ಭಾಷೆಗಳಿಗೆ ಅನುವಾದಿಸುವ ಮೂಲಕ ಕಳೆದುಹೋದ ಹಲವಾರು ಪ್ರಾಚೀನ ಭಾರತೀಯ ಪಠ್ಯಗಳನ್ನು ಪುನಃಸ್ಥಾಪಿಸಲು ಕಾರ್ಯವನ್ನು ನಾವು ಕೈಗೊಂಡಿದ್ದೇವೆ" ಎಂದು ಅವರು ಹೇಳಿದ್ದಾರೆ.
ಒಬ್ಬ ಮನುಷ್ಯನಾಗಿ, ತಾತ್ವಿಕ ಭಿನ್ನತೆಗಳ ಹೊರತಾಗಿಯೂ ಮಾನವೀಯತೆಯ ಏಕತೆಯನ್ನು ಉತ್ತೇಜಿಸಲು ಮತ್ತು ವಿಶ್ವದ ಧಾರ್ಮಿಕ ಸಂಪ್ರದಾಯಗಳ ನಡುವೆ ಸಾಮರಸ್ಯವನ್ನು ಉತ್ತೇಜಿಸಲು ಬದ್ಧರಾಗಿರುವುದಾಗಿದಲೈ ಲಾಮಾ ಅವರು ತಿಳಿಸಿದ್ದಾರೆ. ಅಲ್ಲದೆ, ಒಬ್ಬ ಟಿಬೆಟಿಯನ್ ಆಗಿ ಮತ್ತು 'ದಲೈ ಲಾಮಾ' ಆಗಿ, ಅವರು ಟಿಬೆಟಿಯನ್ ಭಾಷೆ ಮತ್ತು ಸಂಸ್ಕೃತಿಯನ್ನು ಸಂರಕ್ಷಿಸಲು ಮತ್ತು ಟಿಬೆಟ್‌ನ ನೈಸರ್ಗಿಕ ಪರಿಸರದ ರಕ್ಷಣೆಗಾಗಿ ಧ್ವನಿ ಎತ್ತಲು ಬದ್ಧರಾಗಿದ್ದಾರೆ. "ಸ್ಪಷ್ಟವಾಗಿ ಇದು ಭಾರತದ ಹಿಮಾಲಯನ್ಸಮುದಾಯಗಳಾದ,ಪೂರ್ವದಲ್ಲಿರುವ ಅರುಣಾಚಲ ಪ್ರದೇಶದಿಂದ ಪಶ್ಚಿಮದಲ್ಲಿರುವ ಲಡಾಖ್‌ವರೆಗೆ ಸಂಬಂಧಿಸಿದೆ" ಎಂದು ಅವರು ವಿವರಿಸಿದ್ದಾರೆ.

Photo Gallery