2040ರ ಹೊತ್ತಿಗೆ ಚಂದ್ರನ ಮೇಲೆ ಭಾರತದ ಮೊದಲ ಗಗನಯಾತ್ರಿ: ಇಸ್ರೋ ಮುಖ್ಯಸ್ಥ

ಯೋಜನೆಯ ಭಾಗವಾಗಿ ಗಗನಯಾನಿಗಳಾಗಿ ಭಾರತೀಯ ವಾಯು ಸೇನೆಯ ನಾಲ್ಕು ಪೈಲಟ್‌ಗಳ ಆಯ್ಕೆ
Trivandrum / December 12, 2023

ತಿರುವನಂತಪುರಂ, ಡಿ. 12: ಐತಿಹಾಸಿಕ ಚಂದ್ರಯಾನ 3ರ ಯಶಸ್ಸಿನ ಬಳಿಕ ಇಸ್ರೋ ಭಾರತದ ಗಗನಯಾತ್ರಿಗಳನ್ನು
2040ರ ಹೊತ್ತಿಗೆ ಮೊದಲ ಬಾರಿಗೆ ಚಂದ್ರನ ಮೇಲೆ ಕಳಿಸಲು ತಯಾರಿ ನಡೆಸುತ್ತಿದೆ ಎಂದು ಇಸ್ರೋದ ಮುಖ್ಯಸ್ಥ ಎಸ್‌
ಸೋಮನಾಥ್‌ ತಿಳಿಸಿದ್ದಾರೆ.


“ಗಗನಯಾನ ಕಾರ್ಯಕ್ರಮದ ವಿಸ್ತರಣೆಯಾಗಿ, ಬಾಹ್ಯಾಕಾಶ ಸಂಶೋಧನೆಯಲ್ಲಿ ಇನ್ನೊಂದು ಹೆಜ್ಜೆ ಮುಂದಿಡಲು ಇಸ್ರೋ
ಮುಂದಾಗಿದ್ದು, ಇಬ್ಬರು ಅಥವಾ ಮೂವರು ಭಾರತೀಯ ಗಗನಯಾನಿಗಳನ್ನು ಒಳಗೊಂಡ ನೌಕೆಯನ್ನು ಲೋ ಅರ್ಥ
ಆರ್ಬಿಟ್‌ಗೆ ರವಾನಿಸಲು ಯೋಜಿಸಿದೆ. 3 ದಿನಗಳ ಕಾಲ ಸುರಕ್ಷಿತವಾಗಿ ಕಳೆದು ಪೂರ್ವ ನಿರ್ಧರಿತ ಸ್ಥಳಕ್ಕೆ ಮರಳುವುದಕ್ಕೆ
ಅಗತ್ಯವಾದ ಸಿದ್ಧತೆ ನಡೆಯುತ್ತಿದೆ; ಎಂದು ಸೋಮನಾಥ್‌ ಅವರು ಮನೋರಮಾ ಇಯರ್‍‌ಬುಕ್‌ 2024ಕ್ಕೆ ಬರೆದ
ವಿಶೇಷ ಲೇಖನದಲ್ಲಿ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಮನೋರಮಾ ಇಯರ್‍‌ಬುಕ್‌ 2024 ಕಳೆದವಾರ
ಬಿಡುಗಡೆಯಾಯಿತು.


ಈ ಕಾರ್ಯಕ್ರಮಕ್ಕೆ ನಿಯೋಜಿಸಲಾಗಿರುವ ನಾಲ್ಕು ಗಗನಯಾನಿಗಳು, ಭಾರತೀಯ ವಾಯುಸೇನೆಯಿಂದ ಆಯ್ಕೆ ಮಾಡಲಾದ
ಪೈಲಟ್‌ಗಳು. ಪ್ರಸ್ತುತ ಬೆಂಗಳೂರಿನಲ್ಲಿರುವ ಆಸ್ಟ್ರೋನಾಟ್ ಟ್ರೇನಿಂಗ್ ಫೆಸಿಲಿಟಿಯಲ್ಲಿ ತರಬೇತಿಯನ್ನು ಪಡೆಯುತ್ತಿದ್ದಾರೆ ಎಂದು
ಎಂದು ಬಾಹ್ಯಾಕಾಶ ಇಲಾಖೆಯ ಕಾರ್ಯದರ್ಶಿಯೂ, ಬಾಹ್ಯಾಕಾಶ ಆಯೋಗದ ಮುಖ್ಯಸ್ಥರೂ ಆಗಿರುವ ಸೋಮನಾಥ್‌ ತಿಳಿಸಿದರು.
ಮೊದಲ ಮಾನವ ಸಹಿತ ಗಗಯಯಾನವು ಮಾನವನ ಸುರಕ್ಷಿತ ಪಯಣಕ್ಕೆ ಯೋಗ್ಯವಾದ ಎಚ್‌ಎಲ್‌ವಿಎಂ3, ಕ್ಯ್ರೂ ಮಾಡೆಲ್ ಮತ್ತು
ಸರ್ವಿಸ್ ಮಾಡ್ಯುಲ್ ಮತ್ತು ಜೀವ ರಕ್ಷಣೆಗೆ ಬೇಕಾದ ವ್ಯವಸ್ಥೆ.. ಸೇರಿದಂತೆ ಬಹುಮುಖ್ಯ ತಂತ್ರಜ್ಞಾನಗಳನ್ನು ಒಳಗೊಂಡಿದೆ. ಏರ್‍‌
ಡ್ರಾಪ್‌ ಟೆಸ್ಟ್‌, ಪ್ಯಾಡ್‌ ಅಬೋರ್ಟ್ ಟೆಸ್ಟ್‌ ಮತ್ತು ಟೆಸ್ಟ್‌ ವಹಿಕಲ್ ವೆಹಿಕಲ್ ಫ್ಲೈಟ್‌ ಭಾಗವಾಗಿ ಮಾನವರಹಿತ
ಯೋಜನೆಗಳೂ ಜಾರಿಯಲ್ಲಿವೆ.


ಕ್ಯ್ರೂ ಮಾಡ್ಯುಲ್‌, ಭೂಮಿಯನ್ನೇ ಹೋಲುವ ಪರಿಸರ ಇರುವ ವ್ಯವಸ್ಥೆಯಾಗಿದ್ದು, ಗಗನಯಾನಿಗಳು ಸುರಕ್ಷಿತವಾಗಿ ಇರಲು ಅವಕಾಶ
ಮಾಡಿಕೊಡುತ್ತದೆ. ಜೊತೆಗೆ ತುರ್ತು ಸಂದರ್ಭಗಳಲ್ಲಿ ತಪ್ಪಿಸಿಕೊಳ್ಳಲು (ಕ್ಯ್ರೂ ಎಸ್ಕೇಪ್‌ ಸಿಸ್ಟಮ್‌) ಅಗತ್ಯ ಅವಕಾಶಗಳನ್ನು
ಒಳಗೊಂಡಿದೆ.


ಟೆಸ್ಟ್‌ ವೆಹಿಕಲ್‌ನ ಮೊದಲ ಅಭಿವೃದ್ಧಿಯನ್ನು 2023ರ ಅಕ್ಟೋಬರ್ 21ರಂದು ಪರಿಚಯಿಸಲಾಯಿತು. ಕ್ಯ್ರೂ ಎಸ್ಕೇಪ್‌
ಸಿಸ್ಟಮ್‌ಅನ್ನು ಯಶಸ್ವಿಯಾಗಿ ಪ್ರದರ್ಶಿಸಲಾಯಿತು. ಪ್ರಯೋಗದ ವೇಳೆ ಬಂಗಾಳ ಕೊಲ್ಲಿಯಲ್ಲಿ ಇಳಿದ ಕ್ಯ್ರೂ ಎಸ್ಕೇಪ್‌ ಸಿಸ್ಟಮ್‌
ಅನ್ನು ಭಾರತೀಯ ನೌಕ ಸೇನೆ ಸುರಕ್ಷಿತವಾಗಿ ಪಡೆದುಕೊಂಡಿತು. “ ಈ ಯಶಸ್ವಿ ಪ್ರಯೋಗ ಬಹಳ ಮುಖ್ಯವಾಗಿತ್ತು. ಮಾನವ ಸಹಿತ
ಯೋಜನೆಯನ್ನು ಕೈಗೊಳ್ಳಲು ಈ ಯಶಸ್ಸು ಅನಿವಾರ್ಯವಾಗಿತ್ತು. 2025ರಲ್ಲಿ ಮಾನವ ಬಾಹ್ಯಾಕಾಶ ಕಾರ್ಯಕ್ರಮಕ್ಕೆ ಚಾಲನೆ
ಸಿಗಬಹುದು; ಎಂದು ಸೋಮನಾಥ್‌ ಹೇಳಿದರು.


ಇಸ್ರೋದ ಮತ್ತೊಂದು ಮಹತ್ವದ ಬಾಹ್ಯಾಕಾಶ ಯೋಜನೆ, ಆದಿತ್ಯ ಎಲ್ 1 ಕುರಿತು ಮಾತನಾಡಿರುವ ಸೋಮಾನಾಥ್‌, ಸೂರ್ಯ
ಅನ್ವೇಷಣೆಗಾಗಿ ಆರಂಭವಾದ ಭಾರತದ ಮೊದಲ ಯೋಜನೆ. ಲ್ಯಾಗರೇಂಜ್‌ ಪಾಯಿಂಟ್‌ 1 ಎಂಬ ಬಿಂದುವಿನಿಂದ ಸೂರ್ಯನನ್ನು

ಅಧ್ಯಯನ ಮಾಡಲಿದೆ. ಈ ಯೋಜನೆ ಮೂಲಕ ಭಾರತ ಚಂದ್ರನ ಜೊತೆಗೆಸೂರ್ಯನ ಅಧ್ಯಯನದಲ್ಲೂ ಸಾಧಿಸಿರುವ ಪ್ರಗತಿಯನ್ನು
ಪ್ರದರ್ಶಿಸಲಿದೆ.


ಇಸ್ರೋ ಕೇಂದ್ರಗಳು ಮತ್ತು ಶೈಕ್ಞಣಿಕ ಸಂಸ್ಥೆಗಳ ನೆರವಿನೊಂದಿಗೆ ಸ್ಥಳೀಯವಾಗಿ ಅಭಿವೃದ್ಧಿ ಪಡಿಸಿದ 7 ಪೇ ಲೋಡ್‌ಗಳನ್ನು
ಒಳಗೊಂಡ ಆದಿತ್ಯ ಎಲ್ 1 ಗಗನನೌಕೆ, ಸೂರ್ಯನ ಕೊರೊನಾ, ಸೌರಮಾರುತ, ಸೌರಜ್ಞಾಲೆ ಮತ್ತು ಆಯಸ್ಕಾಂತೀಯ ವಲಯಗಳನ್ನು
ಅಧ್ಯಯನ ಮಾಡಲಿದೆ.


ಸೆಪ್ಟೆಂಬರ್ 2, 2023 ರಂದು ಪ್ರಾರಂಭವಾದ ಆದಿತ್ಯ ಎಲ್‌1 ಐದು ವರ್ಷಗಳ ಕಾರ್ಯಾಚರಣೆಗೆ ಸಿದ್ಧವಾಗಿದೆ. ಬಾಹ್ಯಾಕಾಶ
ನೌಕೆಯು ಭೂಮಿಯಿಂದ ಸರಿಸುಮಾರು 1.5 ಮಿಲಿಯನ್ ಕಿಮೀ ದೂರದಲ್ಲಿರುವ ಸೂರ್ಯ-ಭೂಮಿಯ ಲ್ಯಾಗರೇಂಜ್‌ ಪಾಯಿಂಟ್ 1
(L1) ಕಡೆಗೆ ಅದರ ಉದ್ದೇಶಿತ ಹಾದಿಯಲ್ಲಿದೆ. ಅದನ್ನು ಜನವರಿ 2024 ರಲ್ಲಿ ಹ್ಯಾಲೊ ಕಕ್ಷೆಗೆ ಸೇರಿಸಲಾಗುವುದು ಎಂದು ಅವರು
ಮಾಹಿತಿ ನೀಡಿದರು.


ಚಂದ್ರಯಾನ-3 ಮಿಷನ್‌ನ ಯಶಸ್ಸು ಇದು ಒಂದು ಐತಿಹಾಸಿಕ ಸಾಧನೆಯಾಗಿದೆ ಎಂದಿರುವ ಅವರು, ಇದು ಆಗಸ್ಟ್ 23 (ಚಂದ್ರನ
ದಕ್ಷಿಣ ಧ್ರುವದ ಬಳಿ ಇಳಿಯುವುದು) ಅನ್ನು ;ಭಾರತದಲ್ಲಿ ರಾಷ್ಟ್ರೀಯ ಬಾಹ್ಯಾಕಾಶ ದಿನ ಎಂದು ಘೋಷಿಸಲು ಪ್ರಧಾನಿ
ಕಾರಣವಾಯಿತು. 14 ಭೂಮಿಯ ದಿನಗಳ ಮಿಷನ್ ಜೀವನದಲ್ಲಿ, ಇದು ಅಮೂಲ್ಯವಾದ ಚಂದ್ರನ ಡೇಟಾವನ್ನು ನೀಡಿತು,
ಅಲ್ಯೂಮಿನಿಯಂ, ಕ್ಯಾಲ್ಸಿಯಂ, ಕಬ್ಬಿಣ, ಕ್ರೋಮಿಯಂ, ಟೈಟಾನಿಯಂ, ಸಲ್ಫರ್, ಮ್ಯಾಂಗನೀಸ್, ಸಿಲಿಕಾನ್ ಮತ್ತು ಚಂದ್ರನ
ಮಣ್ಣಿನಲ್ಲಿ ಆಮ್ಲಜನಕವನ್ನು ಕಂಡುಹಿಡಿದಿದೆ.


ಕೆಲವು ಮಹತ್ವಾಕಾಂಕ್ಷೆಯ ಚಾಲ್ತಿಯಲ್ಲಿರುವ ಹಾಗೂ ಮುಂಬರುವ ಕಾರ್ಯಾಚರಣೆಗಳನ್ನು ಉಲ್ಲೇಖಿಸಿರುವ ಅವರು, ಇವುಗಳಲ್ಲಿ
ಸಣ್ಣ ಉಪಗ್ರಹ ಉಡಾವಣಾ ವಾಹನ (ಎಸ್‌ಎಸ್‌ಎಲ್‌ವಿ), ಮರುಬಳಕೆ ಮಾಡಬಹುದಾದ ಉಡಾವಣಾ ವಾಹನ (ಆರ್‌ಎಲ್‌ವಿ)
ಕಾರ್ಯಕ್ರಮ, ಎಕ್ಸ್-ರೇ ಖಗೋಳ ಮಿಷನ್ ಎಕ್ಸ್‌ಪೋಸ್ಯಾಟ್ (ಎಕ್ಸ್-ರೇ ಪೋಲಾರಿಮೀಟರ್ ಸ್ಯಾಟಲೈಟ್), ಸ್ಪೇಸ್ ಡಾಕಿಂಗ್
ಪ್ರಯೋಗ ಮತ್ತು ಲಾಕ್ಸ್‌ ಮೀಥೇನ್ ಎಂಜಿನ್ ಇವೆ ಎಂದು ತಿಳಿಸಿದರು.. ;ಒಟ್ಟಿಗೆ, ಈ ಪರಿವರ್ತಕ ಉಪಕ್ರಮಗಳು ಬಾಹ್ಯಾಕಾಶ
ಪರಿಶೋಧನೆಯ ಭಾರತದ ಅನ್ವೇಷಣೆಯಲ್ಲಿ ಹೊಸ ಬಾಹ್ಯಾಕಾಶ ಸಾಹಸವನ್ನು ವ್ಯಾಖ್ಯಾನಿಸುತ್ತವೆ, ವೈಜ್ಞಾನಿಕ ಪ್ರಗತಿಯನ್ನು ಮತ್ತು
ನಿರಂತರವಾಗಿ ವಿಸ್ತರಿಸುತ್ತಿರುವ ಕಾಸ್ಮಿಕ್ ಹಾರಿಜಾನ್ ಅನ್ನು ಉತ್ತೇಜಿಸುತ್ತದೆ.


ಮುಂದುವರಿದು ವಿವರಿಸುತ್ತಾ, ಮೂರು ಹಂತದ ಉಡಾವಣಾ ವಾಹಕವಾದ ಎಸ್‌ಎಸ್‌ಎಲ್‌ವಿ 500 ಕೆಜಿ ಉಪಗ್ರಹವನ್ನು 500
ಕಿಮೀ ಸಮತಲ ಕಕ್ಷೆಗೆ ಉಡಾವಣೆ ಮಾಡಬಲ್ಲದು ಮತ್ತು ಬಹು ಉಪಗ್ರಹಗಳನ್ನು ಅಳವಡಿಸಿಕೊಳ್ಳಬಲ್ಲದು ಎಂದು ಅವರು
ಹೇಳಿದರು. ಲಾಂಚ್ ಆನ್ ಡಿಮ್ಯಾಂಡ್ ಕಾರ್ಯಸಾಧ್ಯತೆ ಹೊಂದಿದ್ದು, ಕನಿಷ್ಠ ಉಡಾವಣಾ ಮೂಲಸೌಕರ್ಯ ಅಗತ್ಯತೆಗಳು ಮತ್ತು
ಕಡಿಮೆ ವೆಚ್ಚದ್ದಾಗಿದೆ. ಇತ್ತೀಚಿನ ದಿನಗಳಲ್ಲಿ ಎರಡು ವಿಮಾನಗಳು, ಎಸ್‌ಎಸ್‌ಎಲ್‌ವಿ ಅಭಿವೃದ್ಧಿ ವಿಮಾನಗಳಿಂದ
ಕಾರ್ಯಾಚರಣೆಯ ವಿಮಾನಗಳಾಗಿ ಪರಿವರ್ತನೆಯಾಗುವ ಹಂತದಲ್ಲಿವೆ..


2023-24ರಲ್ಲಿ ಚಾಲನೆಗೆ ಯೋಜಿಸಲಾಗಿರುವ ಎಕ್ಸ್‌ಪೊಸ್ಯಾಟ್‌, ಭಾರತದ ಮೊದಲ ಪೂರ್ಣ ಪ್ರಮಾಣದ ವೈಜ್ಞಾನಿಕ
ಯೋಜನೆಯಾಗಿದ್ದು, ಇದು ಬಾಹ್ಯಾಕಾಶದ ಎಕ್ಸ್‌ ರೇ ಮೂಲಗಳನ್ನು, ಪ್ರತಿಕೂಲ ಪರಿಸರದಲ್ಲೂ ಅಧ್ಯಯನ ಮಾಡಲಿವೆ. ಇದಕ್ಕೆ
ಸ್ಪೇಡೆಕ್ಸ್‌ನಂತಹ ವೈಜ್ಞಾನಿಕ ಪೇಲೋಡ್‌ಗಳು ನೆರವಾಗಲಿವೆ. ಈ ಪೇ ಲೋಡ್‌ 2024ರ ದ್ವಿತೀಯಾರ್ಧದಲ್ಲಿ ಚಾಲನೆಗೆ
ಯೋಜಿಸಲಾಗಿದೆ. ಈ ಪೇಲೋಡ್‌,ಅವಳಿ ಬಾಹ್ಯಾಕಾಶ ನೌಕೆಯನ್ನು ಒಳಗೊಂಡ ಯೋಜನೆಯಾಗಿದ್ದು, ಇದು ಡಾಕಿಂಗ್ ಮತ್ತು
ಫಾರ್ಮೆಷನ್ ಫ್ಲೈಯಿಂಗ್ ತಂತ್ರಜ್ಞಾನಗಳನ್ನು ಒಳಗೊಂಡಿದೆ. ಜೊತೆಗೆ ಮಾನವ ಸಹಿತ ನೌಕೆಯಾಗಿ ಬಳಕೆಯಾಗುವ ಅವಕಾಶವನ್ನೂ
ಹೊಂದಿದೆ. ಈ ಯೋಜನೆಯಲ್ಲಿ ಮಿನಿ ಉಪಗ್ರಹಗಳೂ ಬಾಹ್ಯಾಕಾಶಕ್ಕೆ ಹಾರಲಿದ್ದು, ಒಂದು ಚೇಸರ್‍‌, ಇನ್ನೊಂದು ಟಾರ್ಗೆಟ್‌ ಆಗಿ
ಕಾರ್ಯನಿರ್ವಹಿಸಲಿವೆ. ಇವು ಒಟ್ಟಿಗೆ ಸಹ ಪಯಣಿಗರಂತೆ ಬಾಹ್ಯಾಕಾಶಕ್ಕೆ ತೆರಳಿವೆ. “ ಡಾಕಿಂಗ್ ಪ್ರಯೋಗದ ಯಶಸ್ಸು, ಮುಂದಿನ

ದಿನಗಳಲ್ಲಿ ನಡೆಯುವ ಚಂದ್ರಯಾನಗಳಲ್ಲಿ ಮರಳುವುದಕ್ಕೆ ಹೊಸ ಹಾದಿಯನ್ನು ಹಾಕಿಕೊಡುವಲ್ಲಿ ಮಹತ್ವದ ಪಾತ್ರವಹಿಸಲಿವೆ
ಎಂದರು.


ಅಷ್ಟೇ ಮಹತ್ವದ ‘ಲಾಕ್ಸ್‌ ಮೀಥೇನ್’(ಲಿಕ್ವಿಡ್‌ ಆಕ್ಸಿಜನ್ ಆಕ್ಸಿಡೈಸರ್ ಮತ್ತು ಮೀಥೇನ್‌ ಇಂಧನ) ಅಭಿವೃದ್ಧಿಯೂ ಹೊಂದಿದೆ.
ಇದು ಭವಿಷ್ಯದ ಹಲವು ಪಲ್ಲಟಗಳಿಗೆ ಕಾರಣವಾಗುವ ಸಂಗತಿಯಾಗಿದೆ. ಮಂಗಳದಂತಹ ಗ್ರಹಗಳಲ್ಲಿರುವ ಪರಿಸರದಲ್ಲಿ ಮನುಷ್ಯನ
ಅನ್ವೇಷಣೆಗೆ ಪೂರಕವಾದ ಸೌಲಭ್ಯಗಳನ್ನು ಒದಗಿಸಲಿದೆ. ಮೀಥೇನ್ ಬಾಹ್ಯಾಕಾಶ ನೌಕೆಯ ಪ್ರಮುಖ ಇಂಧನವಾಗಿದ್ದು, ಇದನ್ನು
ಬಾಹ್ಯಾಕಾಶದಲ್ಲಿ ನೀರು ಕಾರ್ಬನ್‌ ಡೈ ಆಕ್ಸೈಡ್‌ ಮೂಲಕ ಪಡೆದುಕೊಳ್ಳಲು ಸಾಧ್ಯವಿದೆ ಎಂದು ವಿವರಿಸಿದರು.


ಪ್ರಧಾನಮಂತ್ರಿಗಳು 2035ರ ಹೊತ್ತಿಗೆ ಭಾರತೀಯ ಅಂತರಿಕ್ಷ ಕೇಂದ್ರವನ್ನು ಅಸ್ತಿತ್ವಕ್ಕೆ ತರಬೇಕೆಂಬ ಮಹತ್ವಾಕಾಂಕ್ಷಿ ಗುರಿಯನ್ನು
ನಮ್ಮ ಮುಂದೆ ಇರಿಸಿದ್ದಾರೆ ಎಂದು ಹೇಳಿರುವ ಸೋಮನಾಥ್‌, ಅಂತರ ಗ್ರಹೀಯ ಸಂಶೋಧನೆ, ಶುಕ್ರಗ್ರಹ ಯೋಜನೆ ಮತ್ತು
ಮಂಗಳನ ಮೇಲೆ ಲ್ಯಾಂಡರ್ ಕಳಿಸುವುದೂ ಸೇರಿದಂತೆ ಹಲವು ಮಹತ್ವದ ಯೋಜನೆಗಳಿದ್ದು, ಜಾಗತಿಕ ಬಾಹ್ಯಾಕಾಶ
ಸಂಶೋಧನೆಯಲ್ಲಿ ಭಾರತದ ವರ್ಚಸ್ಸು ಹೆಚ್ಚಲಿದೆ’ ಎಂದಿದ್ದಾರೆ.


“ಮುಂದಿನ ದಿನಗಳಲ್ಲಿ ಭಾರತದ ಬಾಹ್ಯಾಕಾಶ ಕಾರ್ಯಕ್ರಮ ಎತ್ತರಕ್ಕೆ ತಲುಪಲಿದೆ. ಪ್ರತಿಯೊಂದು ಯೋಜನೆ ಹಾಗೂ ಪ್ರತಿ
ಅನ್ವೇಷಣೆಯ ಮೂಲಕ ಇಸ್ರೋ ಜಾಗತಿಕ ಮಟ್ಟದಲ್ಲಿ ತನ್ನ ಸ್ಥಾನವನ್ನು ಖಚಿತಪಡಿಸಿಕೊಂಡಿದ್ದು, ದೇಶದ ಹೆಮ್ಮೆಯನ್ನು ಮತ್ತು
ಭಾರತದ ತಾಂತ್ರಿಕ ಸಾಧ್ಯತೆಯನ್ನು ಹಿಗ್ಗಿಸಿದೆ ಎಂದು ಅವರು ಹೇಳಿದ್ದಾರೆ.

Photo Gallery